ಸ ರೆ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ ೧೨
Posted date: 14 Wed, Sep 2016 – 02:07:38 PM

ಕರ್ನಾಟಕದ ಅತ್ಯಂತ ಯಶಸ್ವಿ ರಿಯಾಲಿಟಿ ಟ್ಯಾಲೆಂಟ್ ಶೋ ಆದ ಸರೆಗಮಪ ತನ್ನ ೧೨ನೇ ಸೀಸನ್ನನ್ನು ಪ್ರಾರಂಭಿಸುತ್ತಿದೆ. ಈ ಹಿಂದಿನ ಸೀಸನ್ನುಗಳ ಮೂಲಕ ಗಾಯನ ಲೋಕಕ್ಕೆ ಅಮೂಲ್ಯ ರತ್ನಗಳನ್ನು ಸಮರ್ಪಿಸುವ ಸರೆಗಮಪ ಉತ್ಕೃಷ್ಟ ವೇದಿಕೆ ಎನಿಸಿದೆ. ಲಿಟಲ್ ಚಾಂಪ್ಸ್‌ನ ೧೨ನೇ ಸೀಸನ್ ಮೂಲಕ ಮೂಲಕ ಇದೇ ಶನಿವಾರ ಅಂದರೆ, ಸೆಪ್ಟೆಂಬರ್ ೧೭ರಿಂದ, ರಾತ್ರಿ ೭.೩೦ಕ್ಕೆ ಎಲ್ಲರ ಮನೆಗಳಿಗೆ ಬರಲಿದೆ. ಈಗಾಗಲೇ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಮಕ್ಕಳ ಡೈಲಾಗುಗಳು, ತುಂಟಾಟಗಳು, ಮುಗ್ಧ ಮಾತುಗಳನ್ನ ನೋಡಿ ಕೇಳಿ ಆನಂದಿಸಿರುವ ಕನ್ನಡಿಗರು ಇನ್ನು ಮುಂದೆ ಮಕ್ಕಳ ದನಿಯಲ್ಲಿ ಮಾಧುರ್ಯತೆಯ ಸವಿಯನ್ನ ಸವಿಯಬಹುದಾಗಿದೆ.
    ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದ ಯಶಸ್ಸಿನ ನಂತರ, ಮತ್ತೊಮ್ಮೆ ಅನುಶ್ರೀ ಸರೆಗಮಪ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನ ವಹಿಸಿದ್ದಾರೆ. ಜಡ್ಜುಗಳಾಗಿ, ಸೂಪರ್ ಹಿಟ್ ಕಾಂಬಿನೇಷನ್ ಎನಿಸಿರುವ ಶ್ರೀ ವಿಜಯ್ ಪ್ರಕಾಶ್, ಶ್ರೀ ಅರ್ಜುನ್ ಜನ್ಯ ಹಾಗೂ ಶ್ರೀ ರಾಜೇಶ್ ಕೃಷ್ಣನ್ ಅವರು ಮಕ್ಕಳ ಬೆಳವಣಿಗೆಗೆ ಕಾರಣಕರ್ತರಾಗಲಿದ್ದಾರೆ. ಸರೆಗಮಪ ಸೀಸನ್ ೧೦ ಮತ್ತು ೧೧ರಲ್ಲಿ ಈ ಮೂರು ಜನ ಜಡ್ಜುಗಳು ಹಾಗೂ ಅನುಶ್ರೀಯ ಕಾಂಬಿನೇಷನ್ ಜನರಿಗೆ ಬಲುಪ್ರಿಯವಾಗಿದ್ದು ಈಗ ಮತ್ತೊಮ್ಮೆ ಅದರ ಮುಂದುವರೆದ ಭಾಗ ಜನರ ಮುಂದೆ ಬರಲಿದೆ.
    ಪ್ರೋಮೋಗಳಲ್ಲೇ ಕಾಣುವಂತೆ, ಈ ಸೀಸನ್ ಕೊಡೋ ಮಜಾನೇ ಬೇರೆ ಎಂದು ಹೇಳಹೊರಟಿರುವ ತಂಡ, ಕನ್ನಡ ಸರೆಗಮಪದ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶೇಷತೆಯೊಂದನ್ನ ತರಲಿದೆ. ಪ್ರತಿ ಎಪಿಸೋಡಿನಲ್ಲೂ ಸಂಗೀತ ಲೋಕದ ಪಂಡಿತರೆನಿಸಿರುವ ಗಾಯಕರು, ಸಂಗೀತ ನಿರ್ದೇಶಕರು, ತಂತ್ರಜ್ಞರು, ವಾದ್ಯದವರು, ಹೀಗೆ ಸಂಗೀತದ ವಿವಿಧ ಮಜಲುಗಳಲ್ಲಿ ಸಾಧನೆಗೈದಿರುವ ೨೦ ಜನರ ಜ್ಯೂರಿ ಪಾನೆಲ್ ಮಕ್ಕಳ ಗಾಯನವನ್ನ ನೋಡಿ ತೀರ್ಪು ನೀಡಲಿದ್ದಾರೆ. ಹಾಗಾದರೆ, ಜಡ್ಜುಗಳ ಪಾತ್ರವೇನು, ಜ್ಯೂರಿ ಪಾತ್ರವೇನು, ಹೇಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ, ಹೇಗೆ ಎಲಿಮಿನೇಷನ್ ನಡೆಯುತ್ತದೆ ಎನ್ನುವುದು ಕಾರ್ಯಕ್ರಮದಲ್ಲೇ ಬಹಿರಂಗವಾಗಲಿದೆ.
    ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಸುಮಾರು ೫೦೦೦ ಮಕ್ಕಳ ಆಡಿಷನ್ ಮಾಡಿ, ೩೦ ಗಾಯಕರನ್ನ ಆಯ್ಕೆ ಮಾಡಲಾಗಿದ್ದು, ಮೆಗಾ ಆಡಿಷನ್ನಿನಲ್ಲಿ ೧೫ ಮಕ್ಕಳನ್ನು ಆಯ್ಕೆ ಮಾಡುವ ಯೋಜನೆಯಿದೆ. ಕಳೆದ ಸೀಸನ್‌ಗಳಂತೆ, ಈ ಬಾರಿಯೂ ೫ ವರ್ಷದಿಂದ ೧೩ ವರ್ಷ ವಯಸ್ಸಿನ ಮಕ್ಕಳು ಆಯ್ಕೆಯಾಗಿದ್ದು, ಮುದ್ದು ದನಿಯ ಮುಗ್ಧ ಮಕ್ಕಳ ಗಾಯನ ಹಿಂದೆಂದಿಗಿಂತಲೂ ಕಠಿಣ ಸ್ಪರ್ಧೆ ಹಾಗೂ ಪರೀಕ್ಷೆಗೆ ಸಿದ್ಧರಾಗಲಿದ್ದಾರೆ.
    ಜೀ ಕನ್ನಡ ವಾಹಿನಿಯ ಕಳೆದ ವರ್ಷದಿಂದ ಜವಾಬ್ದಾರಿಯುತ ಮನೋರಂಜನೆಗೆ ಒತ್ತು ನೀಡಿ ಸದಭಿರುಚಿ ಕಾರ್ಯಕ್ರಮಗಳನ್ನೇ ಮಾಡಿಕೊಂಡು ಬಂದಿದ್ದು ಕನ್ನಡಿಗರು ಅದನ್ನು ಸಹೃದಯದಿಂದ ಸ್ವೀಕರಿಸಿದ್ದು, ಈ ಕಾರ್ಯಕ್ರಮದಲ್ಲೂ ಆರೋಗ್ಯಕರ ಮನೋರಂಜನೆಯ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುವ ಇರಾದೆ ಸರೆಗಮಪ ತಂಡದ್ದು. ಸಂಗೀತ ಚೈತ್ರಕಾಲ ಮತ್ತೊಮ್ಮೆ ಪ್ರಾರಂಭವಾಗಲಿದೆ, ಮರಿಕೋಗಿಲೆಗಳ ಕುಹೂ ನಾದ ಇನ್ನು ಮುಂದೆ ಪ್ರತಿ ವೀಕೆಂಡ್ ಎಲ್ಲರ ಮನೆಯಲ್ಲಿ ಕೇಳಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed